ನಾಗೇಂದ್ರ ಉಪ್ಪುಂದ ಸಾರಥ್ಯದಲ್ಲಿ COVERPAGE.IN

ಬೈಂದೂರು: ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಎಲ್ಲೂರಿನಲ್ಲಿ ಮತ್ಸ್ಯ ಬಂಧನ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಮೀನಿನ ಮೌಲ್ಯವರ್ಧಿತ ಖಾದ್ಯಗಳ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿದ್ದು ಇದರ ಶಿಲಾನ್ಯಾಸ ಕಾರ್ಯಕ್ರಮವು ಜನವರಿ 19ರ ಮಧ್ಯಾಹ್ನ 2ಗಂಟೆಗೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಶಾಸಕರಾದ ಬಿ ಎಂ ಸುಕುಮಾರ್ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ರಘುಪತಿ ಭಟ್ ಕೆ,ಸುನಿಲ್ ಕುಮಾರ್,ಲಾಲಾಜಿ ಆರ್ . ಮೆಂಡನ್, ಉಮಾನಾಥ ಕೋಟ್ಯಾನ್, ಭರತ್ ಶೆಟ್ಟಿ ವೈ, ಡಿ. ವೇದವ್ಯಾಸ ಕಾಮತ್, ಹರೀಶ ಪೂಂಜಾ, ಸಂಸದ ಬಿ.ವೈ ರಾಘವೇಂದ್ರ , ಸಚಿವ ಎಸ್. ಅಂಗಾರ, ಮಾಜಿ ಶಾಸಕರಾದ ಕೆ ಗೋಪಾಲ ಪೂಜಾರಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ಪೂಜಾರಿ, ಉದ್ಯಮಿಗಳಾದ ಕೆ ವೆಂಕಟೇಶ್ ಕಿಣಿ, ಗುರುರಾಜ್ ಪಂಜು ಪೂಜಾರಿ ಮುಂತಾದ ಹಲವಾರು ಗಣ್ಯರ ಉಪಸ್ಥಿತಿಯಲ್ಲಿ ಮಾನ್ಯ ಮುಜರಾಯಿ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ.



Govinda Babu Poojari
Managing Director Matsyabandhana Private Limited
ಬೈಂದೂರು ಉತ್ತಮ ಅಭಿವೃದ್ಧಿ ಹೊಂದುತ್ತಿದ್ದು, ಸ್ಥಳೀಯ ಯುವಕರಿಗೆ ಹಾಗೂ ಬಡವರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿದ್ದು, ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸ್ನೇಹಿತರು, ಬಂಧುಗಳು, ಅಭಿಮಾನಿಗಳು ಹಾಗೂ ಸ್ಥಳೀಯ ಸಂಘಸಂಸ್ಥೆಗಳು ಭಾಗವಹಿಸಿ ಶುಭ ಹಾರೈಸಬೇಕೆಂದು ಸಂಸ್ಥೆಯ ಆಡಳಿತ ನಿರ್ದೇಶಕ ಗೋವಿಂದ ಬಾಬು ಪೂಜಾರಿಯವರು ಕೋರಿಕೊಂಡಿದ್ದಾರೆ.


ನರೇಂದ್ರ 
7483946089
Coverpage.in



Image Description