ನಾಗೇಂದ್ರ ಉಪ್ಪುಂದ ಸಾರಥ್ಯದಲ್ಲಿ COVERPAGE.IN
ಇಡೀ ದೇಶವೇ ಸಡಗರ ಸಂಭ್ರಮದಿಂದ ಆಚರಿಸುವ ಈ ಹಬ್ಬಕ್ಕೆ ವರ್ಷದ ಮೊದಲ ಹಬ್ಬವೆಂಬ ಕಾರಣಕ್ಕೊಅಥವಾ ಇದರ ಹಿಂದೆ ಇನ್ಯಾವುದೊ ಕಾರಣವೆದೆಯೆ ಎಂದು ತಿಳಿದುಕೊಳ್ಳುವ ಕುತೂಹಲದ ಹಿಂದೆ ಹೋದಾಗ ಸಿಕ್ಕ ಕೆಲವೊಂದಿಷ್ಟು ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ದೇಶ. ಈ ದೇಶಕ್ಕೆ ಹಬ್ಬಗಳ ದೇಶ ಎಂದೂ ಕರೆಯುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಸರಾಸರಿ ಪ್ರತಿ ತಿಂಗಳೂ ಒಂದೊಂದು ಹಬ್ಬವಿರುತ್ತದೆ. ಹಾಗೆ ಚಳಿಗಾಲದಲ್ಲಿ ವರ್ಷದ ಆರಂಭದಲ್ಲಿ ಬರುವ ಹಬ್ಬ ಈ ಮಕರ ಸಂಕ್ರಾಂತಿ. ವಿಶೇಷವೆಂದರೆ ಇತರೆ ಹಬ್ಬದ ದಿನಗಳು ಪಂಚಾಂಗದ ಅನುಸಾರದಂತೆ ಬದಲಾದರೆ, ಮಕರ ಸಂಕ್ರಾಂತಿ ಮಾತ್ರ ಪ್ರತಿವರ್ಷ ಜನವರಿ 14ಕ್ಕೆ ಬರುತ್ತದೆ.
ಮಕರ ಸಂಕ್ರಾಂತಿಗೆ ಆಧ್ಯಾತ್ಮಿಕ ಮಹತ್ವದಂತೆ ವೈಜ್ಞಾನಿಕ ಕಾರಣವೂ ಇದೆ. ಈ ದಿನಗಳಲ್ಲಿ ರಾತ್ರಿ ದೊಡ್ಡದಿದ್ದು, ಹಗಲು ಸಣ್ಣದಿರುತ್ತದೆ ಆದರೆ ಮಕರ ಸಂಕ್ರಾಂತಿಯ ದಿನ ರಾತ್ರಿ ಮತ್ತು ಹಗಲಿನ ಸಮಯ ಸಮಾನವಾಗಿರುತ್ತದೆ. ಸಂಕ್ರಾಂತಿಯ ನಂತರ ರಾತ್ರಿ ಸಣ್ಣದಾಗಿ ಹಗಲಿನ ಸಮಯ ದೊಡ್ಡದಾಗಿರುತ್ತದೆ. ಹಾಗೆಯೆ ಸಂಕ್ರಾಂತಿಯ ನಂತರ ಋತುವಿನಲ್ಲಿ ಸಾಕಷ್ಟು ಬದಲಾವಣೆಗಳು ಆರಂಭವಾಗುತ್ತದೆ. ಗಾಳಿಯಲ್ಲಿನ ತಂಪು ಕಡಿಮೆಯಾಗಿ ಉಷ್ಣತೆ ಹೆಚ್ಚಾಗುತ್ತ ಹೋಗುತ್ತದೆ.
ಮಕರ ಸಂಕ್ರಾಂತಿ ಎನ್ನಲು ಕಾರಣ
ಮಕರ ಇದೊಂದು ರಾಶಿಯಾಗಿದ್ದು, ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಪ್ರಕ್ರಿಯೆಗೆ ಸಂಕ್ರಾಂತಿ ಎನ್ನುತ್ತಾರೆ. ಈ ದಿನ ಅಂದರೆ ಮಕರ ಸಂಕ್ರಾಂತಿಯ ದಿನ ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ ಹಾಗಾಗಿ ಈದಿನ ಮಕರ ಸಂಕ್ರಾಂತಿಯಾಗಿ ಆಚರಿಸುತ್ತಾರೆ.
ಪ್ರತಿವರ್ಷ ಒಂದೇ ತಾರೀಖು??
ಈ ಪ್ರಶ್ನೆ ಖಂಡಿತ ನಿಮ್ಮಲ್ಲೂ ಅನೇಕರಿಗೆ ಮೂಡಿರಬಹುದು ಅಲ್ವಾ? ಅಂದಹಾಗೆ ಹಿಂದು ಸಂಸ್ಕೃತಿಯಲ್ಲಿ ಕೇವಲ ಇದೊಂದೆ ಹಬ್ಬ ಪ್ರತಿ ವರ್ಷ ಒಂದೇ ತಾರೀಖಿಗೆ ಬರುವಂತದ್ದು ಅದಕ್ಕೆ ಕಾರಣವೆ ಸೂರ್ಯ. ಇದೊಂದೆ ಹಬ್ಬ ಸೂರ್ಯನ ಚಲನೆಗನುಗುಣವಾಗಿ ಆಚರಿಸಲಾಗುತ್ತದೆ ಉಳಿದವೆಲ್ಲ ಹಬ್ಬಗಳು ಚಂದ್ರನ ಚಲನೆಯಾಧಾರಿತವಾಗಿರುತ್ತದೆ.
ಆದರೆ, Solar cycle ಪ್ರತಿ ಎಂಟು ವರ್ಷಕ್ಕೊಮ್ಮೆ ಬದಲಾಗುತ್ತಿರುತ್ತದೆ ಆಗ ಮಾತ್ರ ಈ ಹಬ್ಬವನ್ನು ಜನವರಿ 15ಕ್ಕೆ ಆಚರಿಸಲಾಗುತ್ತದೆ. ಅಂದರೆ ಜನವರಿ ಹದಿನಾಲ್ಕರ ಸಂಜೆ ಸೂರ್ಯಾಸ್ತದ ನಂತರ ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಂದರ್ಭ ಅಂದಿನ ದಿನದ ಅವಧಿ ಮುಗಿಯುವ ಕಾರಣ ಹಾಗೂ ಹಿಂದೂ ಧರ್ಮದಲ್ಲಿ ಸೂರ್ಯನ ಚಲನೆಯನ್ನು ಆಧರಿಸಿದ ವೇಳಾಪಟ್ಟಿಯನ್ನು ಅನುಸರಿಸುವ ಕಾರಣ ಸೂರ್ಯಾಸ್ತದ ಬಳಿಕ ಎದುರಾಗುವ ಸಂದರ್ಭಗಳನ್ನು ಮರುದಿನ ಎಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಜನವರಿ ಹದಿನೈದರಂದು ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಂದು ಸೂರ್ಯನನ್ನು ಆರಾಧಿಸುವ ಮೂಲಕ ಸೂರ್ಯದೇವನ ಕೃಪೆಯನ್ನು ಪಡೆಯಬಹುದು ಎಂಬ ನಂಬಿಕೆ ಈ ದಿನವನ್ನು ಪವಿತ್ರವನ್ನಾಗಿಸಿದೆ.
ಎಳ್ಳು, ಬೆಲ್ಲದ ಸವಿ
ಮಕರ ಸಂಕ್ರಾಂತಿಯ ದಿನದಂದು ಎಳ್ಳು ಬೆಲ್ಲ ಸವಿಯುವ ಪದ್ದತಿಯಿದೆ. ಇದರಂತೆ ಹಿಂದಿನ ಕಹಿಯ ನೆನಪುಗಳನ್ನು ಮರೆತು ಆ ಕಹಿಗೆ ಸಿಹಿಯ ಬೆರೆಸಿ ಬದುಕನ್ನು ಸಿಹಿಯಾಗಿ ಸವಿಯುವದು. ಆದರೆ ಇದರ ಹಿಂದೆಯೂ ವೈಜ್ಞಾನಿಕ ಕಾರಣವಿದೆ. ಸಂಕ್ರಾತಿಯ ಸಮಯ ಚಳಗಾಲವಾಗಿದ್ದರಿಂದ ದೇಹ ತಂಪಾಗಿಯೂ ಶಿತಲವಾಗಿರುವುದರಿಂದ ಅದಕ್ಕೆ ಉಷ್ಣದ ಅಗತ್ಯತೆವಿರುತ್ತದೆ ಎಳ್ಳು ಉಷ್ಣ ಪದಾರ್ಥವಾಗಿರುವುದರಿಂದ ಇದರ ಸೇವನೆಯಿಂದ ದೇಹವು ಬೆಚ್ಚಗಿರಿಸಿ ಶೀತದಿಂದ ದೂರವಿರಿಸುತ್ತದೆ.
ಕೇವಲ ಭಾರತವಷ್ಟೆ ಅಲ್ಲ ಇತರ ಅನೇಕ ದೇಶಗಳೂ ಈ ಹಬ್ಬವನ್ನು ಆಚರಿಸುತ್ತದೆ.
ಹೌದು, ಸಂಕ್ರಾಂತಿ ಹಬ್ಬ ಕೇವಲ ಭಾರತದಲ್ಲಷ್ಟೆಯಲ್ಲ ಏಷಿಯಾಖಂಡದ ಅನೇಕ ದೇಶಗಳಲ್ಲಿ ಈ ದಿನವನ್ನು ವಿಶೇಷವಾಗಿ ಆಚರಿಸುತ್ತಾರೆ. ನೇಪಾಳದಲ್ಲಿ, ಇದನ್ನು ಮಘಿ ಅಥವಾ ಮಾಘಿ ಸಂಕ್ರುತ್, ಥೈಲ್ಯಾಂಡ್‌ನಲ್ಲಿ ಸಾಂಗ್ಕ್ರಾನ್, ಲಾವೊಸ್ನಲ್ಲಿ ಪಿ ಮಾ ಲಾವೊ ಮತ್ತು ಮ್ಯಾನ್ಮಾರ್ನಲ್ಲಿ ಥಿಂಗ್ಯಾನ್ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಕೂಡ ಇದನ್ನು ಲೋಹ್ರಿ, ಮಕರ ಸಂಕ್ರಾಂತಿ, ಪೊಂಗಲ್ ಮುಂತಾದ ಹೆಸರುಗಳಿಂದ ಆಚರಿಸಲಾಗುತ್ತದೆ.
ಈ ಹಬ್ಬವನ್ನು ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಪತಂಗ ಹಬ್ಬ ಎಂದು ಕರೆಯಲಾಗುತ್ತದೆ. ಇದು ಮನರಂಜನೆಯ ಉದ್ದೇಶವಾಗಿದೆಯಾದರೂ, ಒಂದು ವೈಜ್ಞಾನಿಕ ಕಾರಣವೂ ಇದೆ. ಬೆಳಿಗ್ಗೆ ಪತಂಗ(ಗಾಳಿಪಟ) ಹಾರಿಸುವುದರಿಂದ ಬೆಳಗಿನ ಬಿಸಿಲಿನ ಶಾಖ ದೇಹಕ್ಕೆ ಸಿಗುವುದರಿಂದ, ಶರೀರಕ್ಕೆ ಸಾಕಷ್ಟು ವಿಟಮಿನ್ ಡಿ ಸಿಗುತ್ತದೆ. ಇದರಿಂದ ಶೀತದಿಂದ ಉದ್ಭವಿಸುವ ಸಮಸ್ಯೆಗಳನ್ನು ತೊಡೆದುಹಾಕಲು ಇದು ಸಹಾಯ ಮಾಡುತ್ತದೆ.
ಇದಿಷ್ಟು ಸಂಕ್ರಾಂತಿ ಶೋಧದಲ್ಲಿ ಸಿಕ್ಕ ಸಾಲು ಸಾಲು ಮಾಹಿತಿಗಳ ಸಂಕ್ಷಿಪ್ತ ರೂಪ. ನಿಮ್ಮಲ್ಲಿನ ಸಂಕ್ರಾತಿಯ ಸವಿನೆನಪುಗಳಿದ್ದರೆ ಹಂಚಿಕೊಳ್ಳಿ. uppundanagendra@gmail.com
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
Editor-in-Chief
![Image Description](https://blogger.googleusercontent.com/img/b/R29vZ2xl/AVvXsEgO22W32m9Z8_WaqwQm54uXAf0rGR403OsXswuCRpi1NfZTRV0HkeBMeRuFWe7QGXvJcDxOawjogeec_eJfbzvwFE-vFAHiF3uf59qBODgACRrR8ebNOZzv-v98BkVwEzWYeAf-yNZL5BNL95n_GrigSP1QDJ0b-rNAFzZTBFECnUVfZ3siDGnZJqqJNkw/s1600/Purple%20Futuristic%20Digital%20Marketing%20Agency%20Youtube%20Display%20Ad.gif)
0 Comments
coverpage.in welcomes your suggestions !