ನಾಗೇಂದ್ರ ಉಪ್ಪುಂದ ಸಾರಥ್ಯದಲ್ಲಿ COVERPAGE.IN
ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಭಾರತ ಸರ್ಕಾರವು ಚೀನಾವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಮತ್ತು ಚೀನಾವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೋಲಿಸಲು ನಿರ್ಧರಿಸಿದೆ. ಇದರ ಮೊದಲ ಹೆಜ್ಜೆಯಾಗಿ 59 ಚೀನೀ ಆ್ಯಪ್‌ಗಳನ್ನು ಭಾರತ ಸರ್ಕಾರವು ಜುಲೈ 16, 2020 ರಂದು ನಿಷೇಧಿಸಿತ್ತು.
ಭವಿಷ್ಯದ ಆರ್ಥಿಕ ಕ್ರಾಂತಿಗಾಗಿ ಪ್ರಧಾನಿ 'ಆತ್ಮ ನಿರ್ಭರ ಭಾರತ' ಎಂಬ ಘೋಷಣೆಯನ್ನು ಮೊಳಸಿದ್ದಾರೆ.
ಈ ಸನ್ನಿವೇಶದಲ್ಲಿ, ಚೀನಾದ ಆರ್ಥಿಕತೆ ಹೇಗಿದೆ ಮತ್ತು ಅದಕ್ಕೆ ಪ್ರತಿಯಾಗಿ ಭಾರತೀಯ ಆರ್ಥಿಕತೆ ಯಾವ ಹಂತದಲ್ಲಿದೆ ಎನ್ನುವುದನ್ನು ಕುರಿತು ಅವಲೋಕಿಸುವ ಮೊದಲು ಒಂದು ಹೆಜ್ಜೆ ಹಿಂದಕ್ಕೆ ಹೋಗಿ ಚೀನಾದ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳೋಣ.
ಇಂದು ಚೀನಾವನ್ನು ವಿಶ್ವದ ಜಾಗತಿಕ ಕಾರ್ಖಾನೆ ಎಂದು ಕರೆಯುತ್ತಾರೆ ಇದು ಆ ದೇಶಕ್ಕೆ ರಾತ್ರೋರಾತ್ರಿ ಸಿಕ್ಕ ಬಿರುದಲ್ಲ. ಹಾಗಂತ ಸಾವಿರಾರು ವರ್ಷಗಳ ನಿತ್ಯ ನಿರಂತರ ಕಠಿಣ ಪರಿಶ್ರಮವೂ ಇದರಲಿಲ್ಲ. 1990 ರಲ್ಲಿ, ಜಾಗತಿಕ ಉತ್ಪಾದನೆಯ ಕೇವಲ 3% ಅನ್ನು ಪೂರೈಸುತ್ತಿದ್ದ ಚೀನಾದ ಜಾಗತಿಕ ಉತ್ಪಾದನೆಯು ಇಂದು 25% ಕ್ಕೆ ಏರಿದೆ. ಇಂದು ಚೀನ 70% ಮೊಬೈಲ್ ಉತ್ಪಾದನೆ, 50% ಶೂ ಉತ್ಪಾದನೆ, 75% ಜಾಗತಿಕ ಮಾರುಕಟ್ಟೆ. ಸೌರ ಉತ್ಪಾದನೆ, ಶೇಕಡಾ 60 ಸಿಮೆಂಟ್ ಉತ್ಪಾದನೆ, 50 ಪ್ರತಿಶತ ಕಲ್ಲಿದ್ದಲು ಉತ್ಪಾದನೆ, 45 ಶೇಕಡಾ ಹಡಗು ನಿರ್ಮಾಣ, 50 ಶೇಕಡಾ ಉಕ್ಕು ಉತ್ಪಾದನೆ ಎಲ್ಲವೂ ಚೀನಾ ಮಾತ್ರ ಮಾಡುತ್ತಿದೆ. ಅಷ್ಟೇ ಅಲ್ಲ, ಇದು ವಿಶ್ವದ 50 ಪ್ರತಿಶತದಷ್ಟು ಸೇಬುಗಳನ್ನು ಉತ್ಪಾದಿಸುತ್ತದೆ ಮತ್ತು ರಫ್ತು ಮಾಡುತ್ತದೆ, ಅದರ ನಂತರ ಯುಎಸ್ ಶೇಕಡಾ 6 ರಷ್ಟಿದೆ. ಇಲ್ಲಿ ಶೇಕಡಾ 50 ರಿಂದ ಶೇಕಡಾ 6 ನಡುವಿನ ವ್ಯತ್ಯಾಸವನ್ನು ಬಹಳ ಸೂಕ್ಷ್ಮವಾಗಿ ಗಮನಿಸಲೇಬೇಕು.
ಅಷ್ಟೆ ಅಲ್ಲ ವಿಶ್ವದ ಹೆಸರಾಂತ ಕಂಪನಿಗಳ ಐಷಾರಾಮಿ ವಸ್ತುಗಳಲ್ಲಿ 50 ಪ್ರತಿಶತ ವಸ್ತುಗಳನ್ನು ಚೀನಾದಲ್ಲಿ ತಯಾರಿಸಲಾಗುತ್ತದೆ.
1978 ಕ್ಕಿಂತ ಮೊದಲು ಚೀನಾ ವಿಶ್ವದ ಅತ್ಯಂತ ಬಡ ರಾಷ್ಟ್ರಗಳಲ್ಲಿ ಒಂದಾಗಿತ್ತು, ಅದರ ಜಿಡಿಪಿ ಕೇವಲ $ 156 ಯುಎಸ್ಡಿ ಆಗಿದ್ದು, ಈಗ ಅದು 13.61 ಲಕ್ಷ ಯುಎಸ್ಡಿ ಆಗಿದೆ. ಅಲ್ಲದೆ, ಚೀನಾದ ಜಿಡಿಪಿ ಪ್ರತಿವರ್ಷ ಹತ್ತು ಪ್ರತಿಶತದಷ್ಟು ಬೆಳೆಯುತ್ತಿದೆ. ಇಲ್ಲಿಯವರೆಗೆ, ಚೀನಾ ತನ್ನ 80 ಕೋಟಿ ಜನರನ್ನು ಬಡತನದಿಂದ ನಿರ್ಮೂಲನೆಗೊಳಿಸಿದೆ ಎಂದು ಅಂಕಿ ಅಂಶಗಳು ಸಾಬೀತುಪಡಿಸುತ್ತಿದೆ.
ಇಷ್ಟೆಲ್ಲ ಹೇಗೆ ಸಾಧ್ಯವಾಯಿತು? ಕೇವಲ 30- 40 ವರ್ಷಗಳಲ್ಲಿ ಒಂದು ರಾಷ್ಟ್ರ ಈ ಮಟ್ಟಿಗೆ ಅಭಿವೃದ್ಧಿ ಹೊಂದುವುದಕ್ಕೆ ಅನೇಕ ಅಂಶಗಳು ಕಾರಣವಾಗುತ್ತದೆ. ಚೀನಾ ಕೂಡ ಅಂತಹ ಕೆಲವು ಸೂತ್ರಗಳನ್ನು ಅವಳವಡಿಸಿಕೊಂಡು ಜಗತ್ತನ್ನೆ ನಿಬ್ಬೆರಗಾಗಿಸಿದೆ.
1. ದೊಡ್ಡ ಪ್ರಮಾಣದ ಉತ್ಪಾದನೆ(Mass Production)
ಚೀನಿಯರು ಉತ್ಪಾದಿಸುವ ವಸ್ತುಗಳು ಅದೆಷ್ಟೇ ಚಿಕ್ಕದಾಗಿದ್ದರೂ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುತ್ತಾರೆ. ಇದರಿಂದ ಉತ್ಪಾದನಾ ವೆಚ್ಚವು ತುಂಬಾ ಕಡಿಮೆಯಾಗುತ್ತದೆ. ಹೀಗಾಗಿ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಪೂರೈಸಲು ಸಾಧ್ಯವಾಗುತ್ತದೆ. ಅಲ್ಲದೆ ಹೆಚ್ಚಿನ ಪ್ರಮಾಣದ ಉತ್ಪಾದನೆಯಿಂದಾಗಿ ಮಾರುಕಟ್ಟೆಯ ಬೆಲೆಗಿಂತಲೂ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಿದರೂ ಅಧಿಕ ಲಾಭ ಗಳಿಸಲು ಸಹಾಯಕವಾಗುತ್ತದೆ. ಅರ್ಥಶಾಸ್ತ್ರದ ವಿವರಣೆಯಂತೆ ಉತ್ಪಾದನೆ ಹೆಚ್ಚಿದಂತೆ ಉತ್ಪನ್ನದ ವೆಚ್ಚವನ್ನು ಕಡಿಮೆ ಮಾಡುತ್ತದೆ ಇದು ಚೀನಿಯರು ಅಳವಡಿಕೊಂಡ ಮಹತ್ವದ ನಿಯಮ.
2. ಸ್ಪರ್ಧಾತ್ಮಕ ಬೆಲೆಯ ಜೊತೆಗೆ ರಿವರ್ಸ್ ಉತ್ಪಾದನೆ (Competitive pricing with reverse manufacturing)
ಚೀನಿಯರು ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರಪಂಚದ ವಿವಿಧ ವಸ್ತುಗಳ ಆವಿಷ್ಕಾರವನ್ನು ಗಮನಿಸಿ ಆ ವಸ್ತುವಿನ ಬಗ್ಗೆ ಆಳವಾದ ಅಧ್ಯಯನ ನಡೆಸಿ ಅಂತಹದೆ ವಸ್ತುವನ್ನು ಕಡಿಮೆ ವೆಚ್ಚದಲ್ಲಿ ಮತ್ತು ಜನರಿಗೆ ಕೈಗೆಟುಕುವ ದರದಲ್ಲಿ ಮಾರುಕಟ್ಟೆಗೆ ತರುತ್ತಾರೆ. ಈ ಎಲ್ಲ ವಿಷಯಗಳಲ್ಲಿ ಅವರ ಆರ್ & ಡಿ ಮತ್ತು ಆವಿಷ್ಕಾರದ ವೆಚ್ಚದಲ್ಲಿ ಅಗಾಧವಾಗಿ ಉಳಿತಾಯವಾಗುತ್ತದೆ. ಉದಾಹರಣೆಗೆ, 2006 ರಲ್ಲಿ, LG ಮಾರುಕಟ್ಟೆಯಲ್ಲಿ ಮೊದಲ ಟಚ್ ಸ್ಕ್ರೀನ್ ಮೊಬೈಲ್ ಫೋನ್ ಅನ್ನು ಪರಿಚಯಿಸಿತು, ನಂತರ ಅನೇಕ ಮೊಬೈಲ್ ಕಂಪನಿಗಳು ತಮ್ಮ ಉತ್ಪನ್ನಗಳಲ್ಲಿ ಸಾಕಷ್ಟು ಅಭಿವೃದ್ಧಿಪಡಿಸಿ ಹೊಸ ಉತ್ಪನ್ನವನ್ನು ತಯಾರಿಸಿ ಮಾರುಕಟ್ಟೆಯಲ್ಲಿ LG ಯೊಂದಿಗೆ ಪೈಪೋಟಿ ನಡೆಸಿತು. ಈ ಎಲ್ಲ ಅಂಶಗಳನ್ನು ಅಧ್ಯಯನ ಮಾಡಿದ ಚೀನಾ ಬ್ರಾಂಡೆಡ್ ಪೋನ್‌ಗಳನ್ನೆ ಹೋಲುವ ಮೊಬೈಲ್‌ಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರತೊಡಗಿತು. ಪರಿಣಾಮ ಫಸ್ಟ್ ಸ್ಕ್ರೀನ್ ಟಚ್ ಮೊಬೈಲ್ ಫೋನ್ ಕಂಡುಹಿಡಿದ LG ಕಂಪನಿಯ ಯಾವ ಫೋನ್ ಕೂಡ ಇಂದು 2% ಗಿಂತ ಅಧಿಕ ಮಾರಾಟವಾಗಿತ್ತಿಲ್ಲ. ಆದರೆ ಚೀನಾ ಜಗತ್ತಿನ 50% ಮಾರುಕಟ್ಟೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.
3. ಉತ್ಪಾದಕ ಕಾರ್ಮಿಕ (Productive labour)
ಚೀನಾ ದೇಶದ ಕಾರ್ಮಿಕರು ಬಹಳ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾರೆ ಎಂದು ಹೇಳುತ್ತಾರೆ. ಆದರೆ ಅದು ಶುದ್ಧ ಸುಳ್ಳು. ಆದರೆ ಇದಕ್ಕೆ ತದ್ವಿರುದ್ಧವಾಗಿ, ಅಲ್ಲಿನ ಕಾರ್ಮಿಕರು ತಾವು ಪಡೆಯುವ ಸಂಬಳಕ್ಕೆ ಸರಿಯಾಗಿ ಕೆಲಸ ಮಾಡುತ್ತಾರೆ ಹಾಗಾಗಿ ಅವರನ್ನು ಪ್ರೊಡಕ್ಟಿವ್ ಲೇಬರ್ ಎಂದು ಕರೆಯುವುದು. ಉದಾಹರಣೆಗೆ ಭಾರತದಲ್ಲಿ ಒಬ್ಬ ಕಾರ್ಮಿಕ ಎಂಟು ಗಂಟೆಗಳಲ್ಲಿ 10 ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಿದರೆ, ಚೀನಾದಲ್ಲಿ ಒಬ್ಬ ಕಾರ್ಮಿಕ ಎಂಟು ಗಂಟೆಗಳಲ್ಲಿ 50 ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುತ್ತಾನೆ. ವಿಶೇಷವೆಂದರೆ, ಕಂಪನಿಯ ನೀತಿ ನಡತೆಯ ಬಗ್ಗೆ ಆಂದೋಲನ ನಡೆಸಲು ಅಲ್ಲಿನ ನೌಕರರು ಭಾರತದ ನೌಕರರಂತೆ ಬಂದ್, ಮುಷ್ಕರ,ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡುವುದಿಲ್ಲ ಬದಲಾಗಿ ಅವರು ಅನುಸರಿಸುವ ಮಾರ್ಗವೇ ವಿಭಿನ್ನ. ಉದಾಹರಣೆಗೆ ಒಂದು ಬೂಟುಗಳನ್ನು ತಯಾರಿಸುವ ಕಂಪನಿಗಳಲ್ಲಿ ಆಂಧೋಲನ ನಡಿಸಿದರೆ ಆ ದಿನ ಆ ಕಂಪನಿಯ ಕಾರ್ಮಿಕರು 50 ರ ಬದಲು ನೂರು ಬೂಟುಗಳನ್ನು ತಯಾರಿಸುತ್ತಾರೆ ಆದರೆ ಅದೆಲ್ಲವೂ ಬರೀ ಎಡಗಾಲಿನ ಹೋಲಿಕೆಗೆ. ಇವೆಲ್ಲವೂ ಅವರಿಗೆ ಶಾಲೆಯಿಂದ ಕಲಿಸಲಾಗುವ ಕೌಶಲ್ಯ ಅಭಿವೃದ್ಧಿಯ ಮೂಲಕವೇ ಸಾಧ್ಯವಾಗಿದೆ ಎನ್ನುವುದು ವಿಶೇಷ.
5. ಅನುಭವ ಮತ್ತು ಅನುಭವಿ (Experience & expertise)
ಜಗತ್ತಿನಲ್ಲಿ ಇಂದು ಯಾವುದೇ ದೇಶವು ಯಾವುದೇ ಹೊಸ ಉತ್ಪನ್ನವನ್ನು ತಯಾರಿಸಲು ಬಯಸಿದರೆ, ಮೊದಲ ಆದ್ಯತೆಯನ್ನು ಚೀನಾಕ್ಕೆ ನೀಡಲಾಗುತ್ತದೆ. ಕಾರಣ ಅವರ ಅನುಭವ ಹಾಗೂ ಆಸಕ್ತಿ. ಚೀನಿಯರು ತಮ್ಮ ಖಾಯಂ ಗ್ರಾಹಕರ ಬೇಡಿಕೆಗಳನ್ನು ಸರಿಯಾದ ಸಮಯಕ್ಕೆ ಹಾಗೂ ಕಡಿಮೆ ಬೆಲೆಗೆ ಈಡೇರುತ್ತಾರೆ. ಅಲ್ಲದೆ ಪ್ರಮುಖ ವಿಷಯವೆಂದರೆ ಅಲ್ಲಿನ ಸರ್ಕಾರದ ನೀತಿಗಳು ಬಹಳ ಪಾರದರ್ಶಕವಾಗಿರುತ್ತದೆ. ಮುಖ್ಯವಾಗಿ ಒಂದು ವಸ್ತುವಿನ ಉತ್ಪಾದನೆಯ ಅರಿವು ಇರದಿದ್ದರೂ ಅದನ್ನು ಅಧ್ಯಯನಮಾಡಿ ಗ್ರಾಹಕರ ಬೇಡಿಕೆಯಂತೆ ತಯಾರು ಮಾಡಿ ಕೊಡುತ್ತಾರೆ. ಈ ಅಂಶಗಳು ಚೀನಾದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ.
ಈಗ ಭಾರತದ ಆರ್ಥಿಕತೆ ಹೇಗಿದೆ ಎಂದು ನೋಡೋಣ.
1990 ರಲ್ಲಿ ಭಾರತದ ಜಿಡಿಪಿ ಮೌಲ್ಯ 32097 ಕೋಟಿ ಆಗಿತ್ತು, ಇದು 2018 ರಲ್ಲಿ 2.72 ಲಕ್ಷ ಕೋಟಿಗೆ ಏರಿದೆ, ಭಾರತದ ರಫ್ತು ಮೌಲ್ಯವು 2019 ರ ಕೊನೆಯಲ್ಲಿ 330 ಮಿಲಿಯನ್ ಆಗಿದ್ದರೆ, ಚೀನಾದ ರಫ್ತು ಮೌಲ್ಯವು 2019 ರ ಅಂತ್ಯದ ವೇಳೆಗೆ 2.5 ಟ್ರಿಲಿಯನ್ ಆಗಿತ್ತು. ಇಂದು ನಮ್ಮ ದೇಶದ ರಫ್ತು ಮೌಲ್ಯ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಗಮನಿಸಿದರೆ, ಚೀನಾದಂತೆ ದೈತ್ಯ ದೇಶವಾಗಿ ಬೆಳೆಯಲು ನಮಗೆ ಸಾಕಷ್ಟು ಸಮಯ ಬೇಕಾಗಬಹುದು. ಜೊತೆಗೆ ಸರ್ಕಾರದ ಯೋಜನೆಯಾದ ಸ್ವಾವಲಂಬಿ ಭಾರತ, ಮೇಕ್ ಇನ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾದ ಎಲ್ಲ ಅಂಶಗಳನ್ನು ಸಕಾರಾತ್ಮಕ ನಿಟ್ಟಿನಲ್ಲಿ ಜನರಿಗೆ ತಲುಪಿಸಬೇಕು. ಈ ನಿಟ್ಟಿನಲ್ಲಿ ದೇಶದ ಆರ್ಥಿಕತೆಯನ್ನು ಬಲಗೊಳಿಸಬೇಕು.
ನಮ್ಮ ದೇಶದ ಆರ್ಥಿಕತೆಯನ್ನು ಬೆಳೆಸುವುದು ಹೇಗೆ??
1. ಮೊದಲು ಭಾರತ ಸರ್ಕಾರವು ತನ್ನ ವಾಣಿಜ್ಯ ನಿಯಮಗಳು ಮತ್ತು ಕೈಗಾರಿಕಾ ನೀತಿಯನ್ನು ಸರಳೀಕರಿಸಬೇಕಾಗಿದೆ. ಇದರಿಂದ ಹೊಸ ಉತ್ಪಾದನೆಯನ್ನು ಸ್ಥಾಪಿಸಲು ಬಯಸುವ ಉದ್ಯಮಿ ಅಥವಾ ಯುವ ಪೀಳಿಗೆಗೆ ಬಹಳಷ್ಟು ಅನುಕೊಲವಾಗುವುದು. ಈ ಅವಕಾಶವನ್ನು ಬಳಸಿಕೊಂಡು ಯುವ ಪೀಳಿಗೆಯು ದೇಶದಲ್ಲಿ ಉದ್ಯಮ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸ್ರಷ್ಟಿಸಬಹುದು.
2. ನಮ್ಮ ದೇಶದ ಪ್ರತಿಯೊಂದು ರಾಜ್ಯದಲ್ಲೂ ಉತ್ಪಾದನಾ ಕೇಂದ್ರಗಳು ಮತ್ತು ಕೃಷಿ ಕೇಂದ್ರಗಳನ್ನು ನಿರ್ಮಿಸಬೇಕಾಗಿದೆ. ಇದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಡೆಟ್ರಾಯಿಟ್ ನಗರವನ್ನು ಮೋಟಾರ್ ಹಬ್ ಎಂದು ಕರೆಯುವಂತೆಯೇ, ನ್ಯೂಯಾರ್ಕ್ ಅನ್ನು ಹಣಕಾಸು ಕೇಂದ್ರ ಎಂದು ಕರೆಯಲಾಗುತ್ತದೆ, ಹಾಗೂ ಸಿಲಿಕಾನ್ ವ್ಯಾಲಿಯನ್ನು ತಂತ್ರಜ್ಞಾನ ಕೇಂದ್ರ ಎಂದು ಕರೆಯಲಾಗುತ್ತದೆ. ಹೀಗೆ ಭಾರತದಲ್ಲೊಯೂ ಪ್ರತಿ ರಾಜ್ಯದಲ್ಲಿಯೂ ಉತ್ಪಾದನಾ ಕೇಂದ್ರ ಹಾಗೂ ಕ್ರಷಿ ಕೇಂದ್ರಗಳನ್ನು ತೆರೆಯಬೇಕು ಇದಕ್ಕೆ ಆಯಾ ರಾಜ್ಯ ಸರ್ಕಾರಗಳು ಬಯಸಿದಷ್ಟು ಸಹಾಯವನ್ನು ನೀಡಬೇಕು.
3. ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ
ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡುವುದರ ಜೊತೆಗೆ ಇತ್ತೀಚಿನ ತಂತ್ರಜ್ಞಾನದ ಬಗ್ಗೆ ಹಾಗೂ ಅದರ ನಿರ್ವಹಣೆ, ಕೌಶಲ್ಯ ಅಭಿವೃದ್ಧಿ, ಅಭ್ಯಾಸ ಮುಂತಾದ ಕೆಲವು ವಿಷಯಗಳನ್ನು ಪಠ್ಯಕ್ರಮದಲ್ಲಿ ಸೇರಿಸುವುದನ್ನು ಕಡ್ಡಾಯಗೊಳಿಸಬೇಕು. ಜೊತೆಗೆ ಪೋಷಕರು ತಮ್ಮ ಮಕ್ಕಳನ್ನು ಹೊಸ ತಂತ್ರಜ್ಞಾನದ ಅದ್ಯಯನಕ್ಕೆ ಪ್ರೋತ್ಸಾಹಿಸಬೇಕು.
4. "ಮೇಡ್ ಇನ್ ಚೀನಾ ಬಹಿಷ್ಕಾರ"
ಮೇಡ್ ಇನ್ ಚೀನಾ ಬಹಿಷ್ಕಾರ ಎಂಬ ಘೋಷಣೆ ಕೆಲವು ದಿನಗಳ ಹಿಂದೆ ಟ್ವಿಟರ್, ಫೇಸ್‌ಬುಕ್, ವಾಟ್ಸಾಪ್ ಮೂಲಕ ಭಾರತದ ಹೆಚ್ಚಿನ ಸಂಖ್ಯೆಯ ಜನರನ್ನು ತಲುಪುತ್ತಿದೆ ಎಂಬ ಅಂಶವನ್ನು ನಾವು ಸ್ವಾಗತಿಸಬೇಕು. ಇಷ್ಟಾದರೆ ಸಾಲದು ನಮ್ಮ ಈ ಘೋಷಣೆಯನ್ನು ನಾವು ಕಾರ್ಯರೂಪಕ್ಕೆ ತರಲೇಬೇಕು. ಇದು ಮೊದಲು ನಮ್ಮಿಂದಲೇ ಪ್ರಾರಂಭಿಸಬೇಕು. ಮುಂದಿನ ಬಾರಿ ನೀವು ಯಾವುದೇ ವಸ್ತು ಖರೀದಿಸುವಾಗ ಅದು ಭಾರತದಲ್ಲಿಯೇ ತಯಾರಾಗಿದೆಯೆ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಿ. ಇಂದು ಪ್ರತಿ ವಿದೇಶಿ ವಸ್ತುಗಳಿಗೂ ಪರ್ಯಾಯವಾಗಿ ಸ್ಥಳೀಯ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಅದನ್ನು ಹುಡುಕಿ ಖರೀದಿಸಿದರೆ ಭಾರತ ಆತ್ಮ ನಿರ್ಭರವಾಗಿ ಬೆಳೆದು ನಿಲ್ಲುವಲ್ಲಿ ಅನುಮಾನವೇ ಇಲ್ಲ. ಇಂದಿನಿಂದಲೇ Vocal for local ಘೋಷಣೆಯ ಮೂಲಕ ಸ್ವದೇಶಿ ವಸ್ತುಗಳಿಗೆ ಪ್ರಾಧಾನ್ಯತೆ ನೀಡಿದರೆ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ.
ಸ್ವಾವಲಂಬಿ ಭಾರತಕ್ಕಾಗಿ ನಾವು ಏನು ಮಾಡಬಹುದು?
1. ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡಿ.
2. ಸ್ಥಳೀಯ ಸರಕುಗಳನ್ನು ಬಳಸಿ ಮತ್ತು ಅವುಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಜಾಹೀರಾತು ಮಾಡಿ. ಚೀನಾದಲ್ಲಿ ಜನರು ಇದನ್ನೇ ಮಾಡುತ್ತಾರೆ.
3. ಸ್ಥಳೀಯ ಉತ್ಪನ್ನಗಳ ಮಹತ್ವವನ್ನು ನಿಮ್ಮ ಮಕ್ಕಳಿಗೆ ವಿವರಿಸಿ ಇದರಿಂದ ಸ್ಥಳೀಯ ಉತ್ಪನ್ನಗಳ ಬಗ್ಗೆ ಭವಿಷ್ಯದ ಆತಂಕಗಳು ಮಾಯವಾಗುತ್ತವೆ.
4. ಸ್ಕಿಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಒತ್ತು ನೀಡುವ ಮೂಲಕ ಯುವ ಪೀಳಿಗೆಯನ್ನು ಯಾವಾಗಲೂ ಪ್ರೋತ್ಸಾಹಿಸಿ.
5. Vocal for local ಎಂಬ ಘೋಷಣೆಯನ್ನು ಯಾವಾಗಲೂ ನೆನಪಿಡಿ.
ಇದೆಲ್ಲವೂ ಮುಂದಿನ "ಸ್ವಾವಲಂಬಿ ಭಾರತ" ಕ್ಕೆ ಅಡಿಗಲ್ಲಾಗಲಿದೆ.
ಜೈ ಭಾರತ್..!
ಅಂಕಿ ಅಂಶಗಳ ಆಧಾರ : ವಿಕಿಪೀಡಿಯ
Editor-in-Chief
![Image Description](https://blogger.googleusercontent.com/img/b/R29vZ2xl/AVvXsEgO22W32m9Z8_WaqwQm54uXAf0rGR403OsXswuCRpi1NfZTRV0HkeBMeRuFWe7QGXvJcDxOawjogeec_eJfbzvwFE-vFAHiF3uf59qBODgACRrR8ebNOZzv-v98BkVwEzWYeAf-yNZL5BNL95n_GrigSP1QDJ0b-rNAFzZTBFECnUVfZ3siDGnZJqqJNkw/s1600/Purple%20Futuristic%20Digital%20Marketing%20Agency%20Youtube%20Display%20Ad.gif)
0 Comments
coverpage.in welcomes your suggestions !