ನಾಗೇಂದ್ರ ಉಪ್ಪುಂದ ಸಾರಥ್ಯದಲ್ಲಿ COVERPAGE.IN
ಬೈಂದೂರು : ತಾಲೂಕಿಗೆ ಸಮೀಪದ ಊರುಗಳಾದ ಹಾಲಂಬೇರು, ಮೂಡಣಗದ್ದೆ,ಚಂದನ, ಸಂಪಿಗೆಕೊಡ್ಲು,ಮಣ್ಣು ತೊಡಮೆ, ಬುಸಕ್ರಡಿ, ವಸೇರಿ ಭಾಗಗಳಲ್ಲಿ ಅನೇಕ ವರ್ಷಗಳಿಂದ ನೆಟ್‌ವರ್ಕ್ ಸಮಸ್ಯೆ ಇದ್ದು ಆ ಭಾಗದ ಜನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಸಮಸ್ಯೆ ಬಗೆಹರಿಯುವವರಗೂ ಮುಂಬರುವ ಎಲ್ಲಾ ಮಾದರಿಯ ಚುನಾವಣೆಯನ್ನು ಬಹಿಷ್ಕರಿಸಲು ಗ್ರಾಮಸ್ಥರು ಚಿಂತಿಸಿದ್ದರು. ಈ ಬಗ್ಗೆ coverpage.in ವಿಸ್ತೃತ ವರದಿ ಪ್ರಕಟಿಸಿ ಸ್ಥಳೀಯ ನಾಯಕರು, ಅಧಿಕಾರಿಗಳ ಗಮನ ಸೆಳೆದಿತ್ತು.
ಈ ಬಗ್ಗೆ ಮಾನ್ಯ ಶಾಸಕರಾದ ಶ್ರೀ ಬಿ.ಎಂ ಸುಕುಮಾರ ಶೆಟ್ಟಿಯವರು ಸ್ಥಳೀಯರಿಂದ ಸಮಸ್ಯೆಯನ್ನು ಆಲಿಸಿ, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ನೆಟ್ವರ್ಕ್ ಟವರ್ ಸ್ಥಾಪಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರವಿ ಹಾಲಂಬೇರು, ರಾಜೇಶ್ ಮೂಡಣಗದ್ದೆ, ವೀರಭದ್ರ ಗಾಣಿಗ, ಗೋಪಾಲ ಪೂಜಾರಿ, ಅಭಿಷೇಕ್ ಶಿವಾಜಿ ಗಣೇಶ್ ತಗ್ಗರ್ಸೆ, ಮಣಿಕಂಠ ಗಾಣಿಗ, ಮತ್ತಿತರು ಉಪಸ್ಥಿತಿತರಿದ್ದರು.
ಈ ಹಿಂದಿನ ಜನಪ್ರತಿನಿಧಿಗಳು, ಅಧಿಕಾರಿಗಳು ನೀಡಿದ ಹುಸಿ ಭರವಸೆಗಳ ಸಾಲಿಗೆ ಇದೂ ಸೇರುವುದಾ? ಅಥವಾ ಮಾನ್ಯ ಶಾಸಕರು ತಮ್ಮ ಜನಪ್ರಿಯತೆಗೆ ತಕ್ಕಂತೆ ಕೊಟ್ಟ ಮಾತನ್ನು ಉಳಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಮಾಡಿ ಈ ಗಂಭೀರ ಸಮಸ್ಯೆಗೊಂದು ಪರಿಹಾರ ಕಲ್ಪಿಸುತ್ತಾರಾ ಕಾದು ನೋಡೋಣ.
0 Comments
coverpage.in welcomes your suggestions !