ನಾಗೇಂದ್ರ ಉಪ್ಪುಂದ ಸಾರಥ್ಯದಲ್ಲಿ COVERPAGE.IN

ಬೈಂದೂರು : ಬೈಂದೂರು ತಾಲೂಕಿನ ಉಪ್ಪುಂದ ಕಡಲತೀರದ  ಪ್ರತಿಭಾವಂತ ಕಲಾವಿದರ ತಂಡ  ಒಂದಾದಮೇಲೊಂದರಂತೆ ಕಿರುಚಿತ್ರ, ಆಲ್ಬಂ ಸಾಂಗ್ ನ ಸವಿಯನ್ನು ಕಲಾ ರಸಿಕರಿಗೆ ನಿತ್ಯ ಉಣಬಡಿಸುವ ಕಾಯಕವನ್ನು ಮಾಡುತ್ತಿದೆ ಕಲತ್ವ ತಂಡ.


ಈ‌ ಬಾರಿಯ ವಿಶೇಷ ಎಂದರೆ ಕಲತ್ವ ತಂಡ ಹಾಗೂ ಸಿರಿ ಕ್ರಿಯೇಷನ್ ಜಂಟಿಯಾಗಿ ಮತ್ತೆ ನಿಮ್ಮ ಮಂದೆ ಒಲವೇ ಗೆಲುವೆಲ್ಲ ನಿನದೆ ಎಂಬ ಶೀರ್ಷಿಕೆಯಡಿ ಆಲ್ಬಂ ಸಾಂಗ್ ರಚಿಸಿ ಬಿಡುಗಡೆಗೆ ಸಿದ್ಧವಾಗಿಸಿದೆ. ಈ ಹಿಂದೆ ರೌಡಿ ಬೇಬಿ ಹಾಗೂ ನನ್ನ ಗೆಳೆಯ ಆಲ್ಬಂ ಸಾಂಗ್ ಅಪಾರ ಜನಪ್ರಿಯತೆ ಗಳಿಸಿತ್ತು, ಇದೀಗ ಆರ್.ಸಿ.ಬಿ ಅಭಿಮಾನಿಯೊಬ್ಬನ ಕಥೆಯನ್ನಾದರಿಸಿ ಒಲವೇ ಆಲ್ಬಂ ಸಾಂಗ್ ರಚಿಸಲಾಗಿದೆ. ನಟನಾಗಿ ಹಲವಾರು ಕಿರು ಚಿತ್ರದಲ್ಲಿ ಪಾತ್ರ ನಿರ್ವಹಿಸಿ ಜನ ಮೆಚ್ಚುಗೆ ಪಡೆದ ಮನಿಷ್ ಮುಯ್ಲಿ, ಹಲವಾರು ಹಾಡುಗಳಿಗೆ ತಮ್ಮ ಸಾಹಿತ್ಯದಲ್ಲಿ ಮೆರುಗು ನೀಡಿದ್ದರು.  ಈ ಬಾರಿ ಒಲವೇ -ಗೆಲುವೆಲ್ಲ ನಿನಗೆ ಆಲ್ಬಂ ಸಾಂಗ್ ಗೆ ತಮ್ಮದೇ ಶ್ರುತಿ ಸೇರಿಸಿದ್ದಾರೆ. 


 ಮನಿಷ್ ಮುಯ್ಲಿಗೆ ನಾಯಕಿಯಾಗಿ ಕಾರ್ವದಾರಿ ಕಿರುಚಿತ್ರದಲ್ಲಿ ಜನಮನ ಸೆಳೆದ ನಟಿ ಜತೆಯಾಗಿದ್ದಾರೆ. ಡಬ್‌ ಸ್ಮ್ಯಾಶ್ ಖ್ಯಾತಿಯ ರವಿರಾಜ್ ಪೂಜಾರಿ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಕಿರುಚಿತ್ರವನ್ನು ಕೇವಲ 3 ದಿನಗಳಲ್ಲಿ ಕುಂದಾಪುರ, ಉಡುಪಿ, ಮಂಗಳೂರು ಭಾಗದಲ್ಲಿ ಚಿತ್ರೀಕರಿಸಿದ್ದಾರೆ. ಕರಾವಳಿಯ ಹಲವು ಪ್ರೇಕ್ಷಣೀಯ ಸ್ಥಳಗಳಲ್ಲಿ ತಮ್ಮ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ. 

ರವಿರಾಜ್ ಪೂಜಾರಿ

ಚಿತ್ರದ ಛಾಯಾಗ್ರಹಣ ಮತ್ತು ಸಂಕಲನದಲ್ಲಿ ಸನತ್ ಉಪ್ಪುಂದ ಸಹಛಾಯಗ್ರಹಕರಾಗಿ ವಿನಯಚಂದ್ರ ಐತಾಳ್ ಮತ್ತು ಸಹಾಯದಲ್ಲಿ ಜಿ.ಡಿ.ಕೆ ಕಂಚಿಕಾನ್ ಚಿತ್ರೀಕರಣಕ್ಕೆ ಸಹಕಾರಿಯಾಗಿದ್ದಾರೆ.  ಕಲಾವಿದರ ಅಲಂಕಾರದಲ್ಲಿ ಶಶಿ ಶೆಟ್ಟಿ ಹಲ್ತೂರು ಹಾಗೂ ಚಿತ್ರದ ಪ್ರೊಡಕ್ಷನ್ ಮ್ಯಾನೇಜರ್ ಶಿವು ಕುಂದಾಪುರ. ಆಲ್ಬಂ ಸಾಂಗ್ ಚಿತ್ರಿಕರಣಕ್ಕೆ ಡ್ರೋನ್ ಕ್ಯಾಮೆರಾವನ್ನು ಬಳಸಲಾಗಿದ್ದು ಡಿ.ಜೆ ಸುದಿಯವರ ಕಣ್ಣೋಟ ಮನ ಸೆಳೆಯುತ್ತದೆ.

ಸನತ್ ಉಪ್ಪುಂದ

ಒಲವೇ  ಆಲ್ಬಂ ಹೊಸವರ್ಷದ ಮೊದಲ ವಾರದಲ್ಲಿ ಅಂದರೆ ಜನವರಿ 5 ರಂದು ರಾಜ್ಯಾದ್ಯಂತ ಯೂಟ್ಯೂಬ್ ನಲ್ಲಿ ತೆರೆಕಾಣಲಿದೆ ಎಂದು ಕಲತ್ವ ಕಲಾವಿದರ ತಂಡ ತಿಳಿಸಿದೆ.


ಆಲ್ಬಮ್ ಸಾಂಗ್ ಅತಿಹೆಚ್ಚು ಯಶಸ್ಸು ಕಾಣಲಿ ಕಲತ್ವ ತಂಡದ ಮನರಂಜನೆ ಹೀಗೆ ಮುಂದುವರಿಯಲಿ ಅವರ ಎಲ್ಲಾ ಪ್ರಯತ್ನಗಳು ಯಶಸ್ಸು ಕಾಣಲಿ ಎಂದು ಹಾರೈಸುವ COVERPAGE.IN



ನರೇಂದ್ರ
COVERPAGE.IN




Image Description