ನಾಗೇಂದ್ರ ಉಪ್ಪುಂದ ಸಾರಥ್ಯದಲ್ಲಿ COVERPAGE.IN

ಬೆಂಗಳೂರು 

ನಟನೆ,ನಿರ್ದೇಶನ, ಸಂಗೀತ ನಿರ್ದೇಶನ ಹೀಗೆ ಎಲ್ಲದರಲ್ಲೂ ಹೊಸತನವನ್ನು ಬಯಸುವ ಹೊಸ ಪ್ರತಿಭೆಗಳನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸುವಲ್ಲಿ ಭಾರಿ ಹೆಸರುವಾಸಿಯಾದ ಕರಾವಳಿಯ ನಟ ,ನಿರ್ದೇಶಕ,ಸಂಗೀತ ನಿರ್ದೇಶಕ ರವಿ ಬಸ್ರುರು ಗಳಗಳನೆ ಕಣ್ಣೀರು  ಹಾಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಇತ್ತೀಚಿಗೆ ಬಿಡುಗಡೆಯಾದ ರವಿ ಬಸ್ರುರು ನಿರ್ದೇಶನದ  ಗಿರ್ಮಿಟ್ ಎನ್ನುವ ವಿನೂತನ ಸಿನೆಮಾ ನಾಡಿನಾದ್ಯಂತ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಆದರೆ ಕರಾವಳಿಯ ಜನರು ಸಿನಿಮಾವನ್ನು ನೋಡದಿರುವುದು ನಿರ್ದೇಶಕ ರವಿ ಬಸ್ರುರ್ ಮನಸ್ಸಿಗೆ ಸಾಕಷ್ಟು ನೋವಾಗಿದೆ. 
ರವಿ ಬಸ್ರುರು ಮನದ ಮಾತು 
ಒಳ್ಳೆಯದನ್ನ ಆಲೋಚನೆ ಮಾಡುವುದೇ ತಪ್ಪೇನೋ ಅನ್ನಿಸುತ್ತಿದೆ. ಉತ್ತರನೂ ಸಿಗುತ್ತಿಲ್ಲ ನನಗೆ. ನನ್ನ ತರನೇ ನಾಲ್ಕು ಜನ ಬೆಳಕಿಗೆ ಬರಲಿ ಎಂದು ನಾನೇನು ಹೆಜ್ಜೆ ಇಡುತ್ತಿದ್ದೇನೆ ಅದು ಎಲ್ಲೊ ತಪ್ಪು ಅನಿಸುತಿದ್ದೆ.  ಕನಸು ಕಾಣ್ತಾರೆ ಎಲ್ಲರೂ ನಾನು ಹೀಗಾಗಬೇಕು ಹಾಗಾಗಬೇಕು ಎಂದು ಸುಮಾರ್ ಜನ ಕನಸು ಕಾಣ್ತಾರೆ.  ಎಷ್ಟೋ ಜನ ನಾನು ಹೀಗಾಗಬೇಕು ಹಾಗಾಗಬೇಕು ಎಂದು ಬೆಂಗಳೂರಿಗೆ ಬರ್ತಾರೆ ಅವ್ರು ಇಲ್ಲಿ ಬಂದು ಬಹಳ ಕಷ್ಟ ಪಟ್ಟು ಏನು ಆಗಲ್ಲ ಎಂದು ವಾಪಸು  ಹೋಗ್ತಾರೆ. ಅಂತವರಿಗೆಲ್ಲ ಒಂದು  ದಾರಿ ಆಗಲಿ ಎಂದು ನಾನು ಅದಕ್ಕೆ ನೀರು ಎರೆಯುವುದು ತಪ್ಪು ಅಂತಾರೆ. ಇವ್ರಿಗೆ ಹೇಗೆ  ಉತ್ತರ ಹೇಳುವುದು ನನಗೆ ಗೊತ್ತಾಗ್ತಾ ಇಲ್ಲ.  ಫಸ್ಟ್ ಆಲ್ಬಮ್ ಸಾಂಗ್ ಮಾಡಿದಾಗಿನಿಂದ ಇವತ್ತಿನ ತನಕವೂ ಏನೆ ಮಾಡಿದ್ರು ಅದರಲ್ಲಿ ನಮ್ಮ ಊರಿರಬೇಕು, ನಮ್ಮೂರಿನ ಭಾಷೆ ಇರಬೇಕು, ನಮ್ಮ ಸ್ನೇಹಿತರ ಬಳಗ ಇರ್ಬೇಕು ನನ್ನ ತರಾನೇ ಯಾರೆಲ್ಲ ಅಂದ್ಕೊಂಡ್ ಬರ್ತಾರೆ ಅವ್ರೆಲ್ಲ ಬೆಳಕಿಗೆ ಬರ್ಬೇಕು ಎಂದು ನಾನು ಆಲೋಚನೆ ಮಾಡ್ತಿದ್ದೇನೆ.so, ಈಗ ಇದನೆಲ್ಲ ಗಮನಿಸಿದ ಮೇಲೆ ಅನ್ನಿಸುತ್ತಿದೆ ಆತರ ಯೋಚನೆ  ಮಾಡೋದು ತಪ್ಪು ಎಂದು ಹೇಳುತ್ತಿದ್ದಾರೆ ಜನ. ನಾವು ವರ್ಷಕ್ಕೆ ಒಂದ್ ಸಿನೆಮಾ ಮಾಡ್ತೀವಿ ನನಗೆ  ಬೇರೆ ಕೆಲ್ಸನೂ ಇದೆ ಎಲ್ಲರಿಗೂ ಅವರವರ  ಕೆಲಸ ಇದೆ.  ವರ್ಷಕ್ಕೆ ಹವ್ಯಾಸ ಎಂದು ಒಂದ್ ಸಿನೆಮಾ ಮಾಡ್ತೀವಿ. ಆ ಮೂಲಕ ಒಂದಷ್ಟು ಪ್ರತಿಭೆಗಳು ಬೆಳಕಿಗೆ ಬರಲಿ ಎಂದು. ಇಲ್ಲಿ ಬೇಜಾರಿನ ಸಂಗತಿ ಎಂದರೆ ನನ್ನೂರಿನಲ್ಲಿ  ನನ್ನನ್ನು ಬೆಳಕಿಗೆ ತಂದವರು ಒಟ್ಟು  ಒಂಬತ್ತುವರೆ ಲಕ್ಷದಷ್ಟು ಜನ ಇದ್ದಾರೆ ಅವರ್ಯಾರಿಗೂ ಆ ೨೮೦ ಮಕ್ಕಳ ಕೂಗು ಕೇಳಿಸಲಿಲ್ಲ ಎಂದರೆ ನನಗೆ  ಬೇಜಾರಾಗ್ತಾ ಇದೆ. ಬರಿ ೧೨೮೬ ಜನ ಮಾತ್ರ ಥಿಯೇಟರ್ ಗೆ  ಬಂದಿದ್ದಾರೆ.  ಬಿಡಿ ರವಿ ಬಸರೂರ್ ಬಿಟ್ಟಾಕಿ  ಆ ಮಕ್ಕಳ ಬಗ್ಗೆನೂ ಯೋಚ್ನೆ ಮಾಡದಿರುವುದು ನನಗೆ ಬೇಜಾರ್ ಆಗ್ತಿದೆ. ಎಲ್ಲ ಕಡೆ ಸಿನಿಮಾವನ್ನು ತೆಗೆದರು ನನಗೆ  ಬೇಜಾರಿಲ್ಲ ಅದು ಅವರವರ ವೈಯಕ್ತಿಕ ನಿರ್ಧಾರ. ಜನ ಬರಲಿಲ್ಲ ಅಂದರೆ ಅವ್ರೇನು ಮಾಡ್ತಾರೆ? ಅವ್ರದೇನು ತಪ್ಪಿಲ್ಲ . ತಪ್ಪು ಯಾರದ್ದೆಂದು ನನಗು ಗೊತ್ತಾಗ್ತಾ ಇಲ್ಲ. ನನ್ನ ನೋವನ್ನು ಯಾರ ಬಳಿ ಹೇಳಿಕೊಳ್ಳಿ ನಾನು ? ಜನರ ಬಳಿ ಹೇಳಿಕೊಂಡರೆ ರವಿ ಬಸರೂರ್ ಅಳ್ತಾರೆ ಎಂದು ಗೇಲಿ ಮಾಡುತ್ತಾರೆ.  ಅದಕ್ಕೆ ನಿಮ್ಮ ಬಳಿ ಹೇಳಿಕೊಂಡು ನನ್ನ ನೋವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ  ಎಂದು ವಿಡಿಯೋ ಮಾಡುತಿದ್ದೇನೆ ಅಷ್ಟೇ. ನಾನು ಇಲ್ಲಿ ತನಕ ಏನು ಮಾಡೋಕೆ ಹೊರಟಿದ್ದೆ ಉದ್ದೇಶ ಇಷ್ಟೇ, ಒಂದು ಗ್ರಾಮ ಬೆಳೆದರೆ ತಾಲೂಕು ಬೆಳೆಯುತ್ತದೆ, ತಾಲೂಕು ಬೆಳೆದರೆ ಮಾತ್ರ ಜಿಲ್ಲೆ ಬೆಳೆಯುತ್ತದೆ, ಜಿಲ್ಲೆ ಬೆಳೆದರೆ ಮಾತ್ರ ದೇಶ ಬೆಳೆಯುತ್ತದೆ, ದೇಶ ಬೆಳೆದರೆ ನಾವೆಲ್ಲ ಬೆಳೆದ ಹಾಗೆ ಆದ್ದರಿಂದ ಒಂದು ಸ್ಟಾರ್ಟ್ ಅಂತ ಆಗಲಿ ಎಂದು ಅದನ್ನು ನನ್ನ ತರಾನೇ ತುಂಬಾ ಜನ ಹೆಜ್ಜೆ ಇಡಲಿ ಎಂದು ನಾನು ಹಳ್ಳಿ ಬೆಳಸಬೇಕು ಎಂದು ಎಲ್ಲಿ  ಹೋದರು ಹಳ್ಳಿ ಬಗ್ಗೆ ಹೇಳುತ್ತಿದ್ದೆ. ನಾನು ನನ್ನ ಹಳ್ಳಿ ಬಗ್ಗೆ ಹೇಳೋಕೆ  ಶುರು ಮಾಡಿದ್ಮೇಲೆ  ಅವರವರು ಅವರವರ ಹಳ್ಳಿ ಬಗ್ಗೆ ಹೇಳಿಕೊಳ್ಳಲ್ಲಿ ಬೆಳವಣಿಗೆ ಆಗಲಿ ಎಂದು ಉದ್ದೇಶ ಅಷ್ಟೇ ಇದರಲ್ಲಿ.  ನನಗೆ ಕೆಲಸ ಇದೆ. ಭಗವಂತ ಒಳ್ಳೆಯ  ಹೆಸರನ್ನು ನೀಡಿದ್ದಾನೆ. ನಾನು ಆ ದಿಕ್ಕಿನಲ್ಲಿ ಹೋಗಬಹುದು. ಈಗ ನೋಡೋಕೆ ಹೋದರೆ ನನಗನ್ನಿಸುತ್ತಿದೆ ಎಲ್ಲರೂ ಏನು  ಮಾಡಿಕೊಂಡು ಬಂದರೊ  ಬೆಳೆದ ನಂತರ ಯಾರನ್ನು ಮಾತಾಡ್ಸೋದು ಇಲ್ವೋ ನಾನು ಅದೇ ರೀತಿ ಇರಬೆಕಿತ್ತು  ಎಂದು  ಅನ್ನಿಸುತ್ತಿದೆ. ಹಾಗಾದರೆ ಏನು ವ್ಯತ್ಯಾಸ ನನಗು ಅವರಿಗೂ? ಎಲ್ಲರೂ ಒಂದು ದಿನ ಸಾಯ್ತಾರೆ  ಬಟ್ ಏನಾದ್ರು ಒಂದ್ ಸಾಧನೆ  ಮಾಡಿ ಸಾಯ್ಬೇಕು ಅಂತ ನಾನು  ಇಷ್ಟೆಲ್ಲ ಮಾಡ್ತಿದ್ದದ್ದು ಅಷ್ಟೇ,
 ಏನು ಮಾಡುವುದೆಂದು ಉತ್ತರ ಸಿಗುತ್ತಿಲ್ಲ ಮನಸು ಮಾತ್ರ ಈಗ ಗಟ್ಟಿಯಾಗೋಗಿದೆ.  ಅಂದರೆ ಅಷ್ಟು ಮಕ್ಕಳ ಕೂಗು ಕೇಳಿಸಿಲ್ಲ  ಯಾರಿಗೂ.  ಆ ದಿಕ್ಕಲ್ಲಿ ಗಟ್ಟಿಯಾಗೋಯ್ತು ಮನಸ್ಸು. ಅದರ ಜೊತೆಗೆ ಇನ್ನು ಮುಂದಿನ ಎಷ್ಟೋ ಪ್ರತಿಭೆಗಳಿಗೆ ಅವಕಾಶ ವಂಚಿತರಾಗುತ್ತಾರಲ್ಲ ಎಂದು ನೆನೆದು ನಾನು ಮಂಕಾಗಿದ್ದೇನೆ.  ನನ್ನ ಹತ್ತಿರ ಏನು ಮಾತಾಡೋಕು ಪದಗಳು ಸಿಗುತ್ತಿಲ್ಲ. ಬಟ್ ಒಂದ್ ಹೇಳೋಕೆ ಇಷ್ಟ ಪಡ್ತೀನಿ ನಾವು ಈಗ  ಮಂಕಾಗಿರಬಹುದು ಒಂದ್ ಒಳಗೆ ಮನಸ್ಸು ಗಟ್ಟಿ ಇರಲಿ ನಾವು ಸತ್ತೋಗಿಲ್ಲ ಖಂಡಿತ ಇನ್ನೊಂದು  ಪ್ರಯೋಗ ಮಾಡೋಣ.  ನಿಮ್ಮೆಲ್ಲರ ಸಪೋರ್ಟ್ ನನಗಿರುತ್ತೆ ಎಂದು ಅಂದುಕೊಂಡಿದ್ದೇನೆ. ದಯವಿಟ್ಟು ಮನಸಲ್ಲಿ ಏನಾದರೂ ನೋವಿದ್ದರೆ ಕಣ್ಣೀರು ಹಾಕಿ ಅದನ್ನು ಕಳೆದುಕೊಂಡು ಬಿಡಿ. ಕಳೆದೆರಡು  ದಿನದಿಂದ ನನಗೆ ತಡೆದುಕೊಳ್ಳಲು ಆಗಲಿಲ್ಲ ಅದಕೋಸ್ಕರ ನಿಮ್ಮೆಲ್ಲರಿಗೂ ಒಂದ್ ವಿಡಿಯೋ ಕಳಿಸಿ ಧೈರ್ಯ ತುಂಬೋಣ ಎಂದು ವಿಡಿಯೋ ಮಾಡಿದ್ದೆ. ಸೊ ಧೈರ್ಯ ಕಳ್ಕೊಬೇಡಿ ಇನ್ನೊಂದ್ ಪ್ರಾಜೆಕ್ಟ್ ಮಾಡೋಣ ನಮ್ಮ ಪ್ರಯತ್ನ  ಮಾತ್ರ ನಾವ್ ನಿಲ್ಲಿಸಲು ಹೋಗೋದು ಬೇಡ.  ದೇವ್ರು ಎಲ್ಲರಿಗು ಒಳ್ಳೇದು ಮಾಡ್ಲಿ ಎಷ್ಟು ಒಳ್ಳೇದು ಮಾಡ್ಲಿ ಎಂದರೆ ಬೇರೆಯವರ ಬಗ್ಗೆ ಕೆಟ್ಟದ್ದು ಯೋಚನೆ ಮಾಡಲು ನಮಗ್ಯಾರಿಗೂ ಟೈಮ್ ಸಿಗದೇ ಇರ್ಲಿ.  ಎಂದು ಗಿರ್ಮಿಟ್ ಸಿನಿಮಾ ತಂಡದ ಗ್ರೂಪ್ ಅಲ್ಲಿ ಹೇಳಿಕೊಂಡಿದ್ದಾರೆ. 

ಕಾರಣ ಏನಿರಬಹುದು?
 ರವಿ ಬಸ್ರುರು ಹೇಳಿದಂತೆ ಕರಾವಳಿಯ ಜನ ಸಿನಿಮಾ ನೋಡಲು ಆಸಕ್ತಿ ತೋರಿಸಿಲ್ಲ ನಿಜ. ಆದರೆ ರಾಜ್ಯದಂತ ಹೆಚ್ಚಿನ ಕಡೆ ಸಿನೆಮಾ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ ಆದರೂ ಚಿತ್ರವನ್ನು ಚಿತ್ರಮಂದಿರದಿಂದ ತೆಗೆದು ಹಾಕಲಾಗುತ್ತಿದೆ 
ಎನ್ನುವ ಗುಮಾನಿ ಹರಿದಾಡುತ್ತಿದೆ. ಇದರ  ಹಿಂದಿನ ಉದ್ದೇಶ  ಏನಿರಬಹುದು? ಸ್ಟಾರ್ ನಟರ ಸಿನಿಮಾಗಳಿಗೆ ಜಾಗ ಮಾಡಿ ಕೊಡುವ ಸಂಚು ನಡೀತಿದ್ಯಾ? 
ಒಂದು ಚಿತ್ರ ನಿರ್ಮಾಣ ಮಾಡಬೇಕೆಂದರೆ, ಅದರ ಹಿಂದೆ ಅನೇಕ ಕೈಗಳ ಶ್ರಮವಿರುತ್ತದೆ.ಅದಕ್ಕಾಗಿ ಹಗಲಿರುಳು ಕಷ್ಟ ಪಟ್ಟು ತಿಂಗಳುಗಳಕಾಲ ದುಡಿದು ಅದಕ್ಕೊಂದು ರೂಪ ಕೊಟ್ಟು ಚಿತ್ರ ಬಿಡುಗಡೆ ಮಾಡಿ ಜನಗಳಿಂದ ಯಾವ ರೀತಿ ಪ್ರತಿಕ್ರಿಯೆ ಬರುತ್ತದೆ ಎಂದು ಕಾಯುತ್ತಾರೆ. ಆದರೆ ಇಲ್ಲಿ ಪ್ರತಿಕ್ರಿಯೆ ಬರುವ ಮೊದಲೇ ಆ ಚಿತ್ರವನ್ನು ಚಿತ್ರ ಮಂದಿರದಿಂದ ತಗೆದು ಹಾಕಿದ್ರೆ, ಇಡಿ ತಂಡಕ್ಕೆ  ಅದು ಯಾವ ರೀತಿ ಪರಿಣಾಮ ಬಿರುತ್ತೆ! 

  ರವಿ ಬಸ್ರುರ್ ರವರು ನಿರ್ದೆಶಿಸಿದ ಗಿರ್ಮಿಟ್ ಚಿತ್ರ ಮಕ್ಕಳನ್ನು ಹಾಕಿಕೊಂಡು ಮಾಡಿದ ಹೊಸತರಹದ ಚಿತ್ರ. ಸಾಮಾನ್ಯವಾಗಿ ಸಿನೆಮಾ ನಟರ ಕಾಲ್ ಶೀಟ್ ಬೇಕೆಂದಾಗ ಸಿಗುತ್ತದೆ. ಆದರೆ ಮಕ್ಕಳು ಶಾಲೆಯ ರಜೆ ದಿನಗಳಲ್ಲಿ ಮಾತ್ರ ಸಿಗುತ್ತಾರೆ. ಅಲ್ಲದೆ ಬೇರೆ ಚಿತ್ರಗಳ ಹಾಗೆ ದುಡ್ಡು ಗಳಿಸುವದಕ್ಕೆ ಮಾಡಿರೋ ಚಿತ್ರ ಇದಲ್ಲ. ಯುವ ಪ್ರತಿಭೆಯನ್ನು ಗುರುತಿಸಲು ಮಾಡಿರುವ ಚಿತ್ರ ಗಿರ್ಮಿಟ್. ಮಕ್ಕಳು ನಟಿಸಿರುವದರಿಂದ ಒಂದೇ ಟೇಕ್ ನಲ್ಲಿ ಮುಗಿವಂತ್ತದ್ದು ಅಲ್ಲ. ಇಲ್ಲಿ ನಿರ್ದೇಶಕರ ತಾಳ್ಮೆ ಮೆಚ್ಚುವಂಥದದ್ದು. ಸಿನೆಮಾ ಮಂದಿರಗಳಲ್ಲಿ ಒಬ್ಬ ಸ್ಟಾರ್ ನಟನ ಚಿತ್ರ ಬಿಡುಗಡೆ ಆಗುತ್ತೆ ಅಂದಾಗ, ಈಗಾಗಲೇ ಚಿತ್ರ ಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತಿರುವ ಚಿತ್ರಗಳ ಪ್ರದರ್ಶನವನ್ನು ನಿಲ್ಲಿಸಲು ಮಾಡುವ ಒಳಸಂಚು ಸ್ಯಾಂಡಲ್ ವುಡ್ ಗೆ  ಹೊಸತಲ್ಲ. ಗಿರ್ಮಿಟ್ ನೊಂದಿಗೂ ಅಂತಹದೇ ಪ್ರಯತ್ನ ನಡೀತಿದ್ಯಾ? ಯಾಕಂದರೆ ಗಿರ್ಮಿಟ್ ಎನ್ನುವ  ಮಕ್ಕಳ ಚಿತ್ರದಲ್ಲಿ ಎಲ್ಲವೂ ಅದ್ಭುತವಾಗಿದೆ ಚಿತ್ರದ ಥೀಮ್, ಕಾನ್ಸೆಪ್ಟ್, ಒಂದು ಸರಿಯಾದ ಸಂದೇಶ ಎಲ್ಲವೂ ಇದೆ. ಇದೊಂದು ಅತ್ಯುತ್ತಮ ಮತ್ತು ಹೊಸತನದ ಚಿತ್ರ. ಆದರೂ ಯಾಕೆ ಗಿರ್ಮಿಟ್ ಚಿತ್ರಮಂದಿರದಲ್ಲಿ ನಿಲ್ಲುತ್ತಿಲ್ಲ? 

ಸ್ಟಾರ್ ನಟರದ್ದೆ ಕಾರುಬಾರು!
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸಬರಿಗೆ ಹೊಸತನಕ್ಕೆ ಅವಕಾಶ ಸಿಗದಿರುವುದು ದುರಂತದ ಸಂಗತಿ. ಇಲ್ಲಿ ಸ್ಟಾರ್ ನಟರದ್ದೆ ಕಾರುಬಾರು. ಅವರು ಹೇಳಿದ್ದೆ ವೇದ ವಾಕ್ಯ ಈ ಸಿನೆಮಾ ಇಂಡಸ್ಟ್ರಿಯಲ್ಲಿ. ಹಾಗಾದಲ್ಲಿ ಮುಂದಿನ ದಿನಗಳಲ್ಲಿ ಸಿನಿಮಾ ರಂಗ ಹೊಸಬರ ಪಾಲಿಗೆ ಬಾಗಿಲು ಮುಚ್ಚಿದಂತೆಯೇ ಸರಿ.
 ಗಿರ್ಮಿಟ್ ಚಿತ್ರ ರವಿ ಬಸ್ರುರ್ ರವರ ಮೊದಲ ಚಿತ್ರವೇನಲ್ಲ.ಹಲವು ಸ್ಟಾರ್ ನಟರ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಎಲ್ಲಿಯೂ ಅವರಿಗೆ ಯಾವ ತೊಂದರೆ ಬಂದಿಲ್ಲ ಏಕೆಂದರೆ ಅದೆಲ್ಲ  ಸ್ಟಾರ್ ನಟರ ಚಿತ್ರಗಳು. ಆದರೆ ಗಿರ್ಮಿಟ್ ಚಿತ್ರದಲ್ಲಿ ಯಾವ ಸ್ಟಾರ್ ನಟನು ಇಲ್ಲ. ಬರಿ ಮಕ್ಕಳನ್ನು ಹಾಕಿಕೊಂಡು ಮಾಡಿರುವ ಚಿತ್ರ. ಅಲ್ಲದೆ ಅವರು ಯಾವ ಸ್ಟಾರ್ ನಟರ ಮಕ್ಕಳು ಅಲ್ಲ ಸಾಮಾನ್ಯ ಜನರ ಚಿತ್ರಾಭಿಮಾನ ಹೊಂದಿದವರ ಮಕ್ಕಳು ಹಾಗಾಗಿ ಕನ್ನಡ ಸಿನಿಮಾದ ಕೆಲ ಮಂದಿಗೆ ಈ ಗಿರ್ಮಿಟ್ ಖಾರವಾಗಿರಬಹುದು. 

ಅದೇನೆ ಇರಲಿ, ಗಿರ್ಮಿಟ್ ಎನ್ನುವ ಅದ್ಬುತ ಸಿನಿಮಾದ ಎತ್ತಂಗಡಿ ಕ್ರಮವನ್ನು ನಾವು ಒಗ್ಗಟ್ಟಾಗಿ ಖಂಡಿಸಲೇ ಬೇಕು. ಕಲೆ ಯಾರೊಬ್ಬರ ಸೊತ್ತಲ್ಲ. ಕನ್ನಡ ಸಿನಿಮಾ ರಂಗವನ್ನು ಯಾರೋ ಒಂದು ನಾಲ್ಕು ಮಂದಿ ನಿಯಂತ್ರಿಸಲು ನಾವು ಅವಕಾಶ ಮಾಡಿಕೊಡಬಾರದು. ಹಾಗೆ ಹೊಸ ಪ್ರಯತ್ನಕ್ಕೆ ಹೆಚ್ಚು ಒತ್ತು ನೀಡಬೇಕು. ಪರಭಾಷಾ ಚಿತ್ರಗಳಿಗೆ ಕನ್ನಡ ನೆಲದಲ್ಲಿ ನಿಯಂತ್ರಣ ತರಬೇಕು. 
ಕನ್ನಡ ಚಿತ್ರಾಭಿಮಾನಿಗಳಿಗೆ ಒಂದು ಕಳಕಳಿಯ ಮನವಿ, ಎಲ್ಲರೂ ಜೊತೆಯಾಗಿ ಈ ಎತ್ತಂಗಡಿ ಕ್ರಮವನ್ನು ಖಂಡಿಸಿ,ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನಿಡೋಣ, ಜೊತೆಗೆ ಕರಾವಳಿಯ ಜನರೇ ನಿಮ್ಮೂರಿರ ೨೮೦ಕ್ಕೂ ಹೆಚ್ಚು ಮಕ್ಕಳು ಅಭಿನಯಿಸಿದ ಗಿರ್ಮಿಟ್ ಚಿತ್ರವನ್ನು ಚಿತ್ರ ಮಂದಿರದಲ್ಲಿ ನೋಡಿ, ಕ್ರಿಯಾಶೀಲ ವ್ಯಕ್ತಿತ್ವದ ಕಲಾತ್ಮಕ ನಿರ್ದೇಶಕ ರವಿ ಬಸ್ರುರು  ಪ್ರಯತ್ನವನ್ನು ಪ್ರೋತ್ಸಾಹಿಸೋಣ ಅವರ ಜೊತೆ ನಿಲ್ಲೋಣ. 

ನಾಗೇಂದ್ರ ಉಪ್ಪುಂದ

Image Description