ರಾಜಕಾರಣದಲ್ಲಿ ಓರ್ವ ಸಂಭಾವಿತ ರಾಜಕಾರಣಿಯಾಗಿ ಮುಂದುವರಿಯುತ್ತಿರುವುದು ಮಾತ್ರವಲ್ಲ, ಸಾಮಾಜಿಕ,
ಧಾರ್ಮಿಕ, ಔದ್ಯೋಗಿಕ, ಶೈಕ್ಷ ಣಿಕ ಕ್ಷೇತ್ರಗಳಲ್ಲೂ ಆಳವಾಗಿ ತೊಡಗಿಸಿಕೊಂಡು ತನ್ನದೇ ಛಾಪು ಮೂಡಿಸಿರುವ
ಬೈಂದೂರು ಶಾಸಕ ಶ್ರೀ ಬಿ.ಎಂ ಸುಕುಮಾರ ಶೆಟ್ಟಿ ಅವರ ಸಾಧನೆ ಅಭಿನಂದನಾರ್ಹ.
ಬೈಂದೂರು ತಾಲೂಕಿನ ವಂಡ್ಸೆ ಗ್ರಾಮದಲ್ಲಿ ಜನಿಸಿದ
ಶ್ರೀ ಬಿ.ಎಂ ಸುಕುಮಾರ ಶೆಟ್ಟಿ ಅವರು ಹಣ, ಅಧಿಕಾರದ
ಆಸೆ ಇಲ್ಲದೆ ಸನ್ಯಾಸಿಯಂತೆ ಜೀವನ ನಡೆಸುತ್ತಿರುವ
ಒಬ್ಬ ಪ್ರಖರ ಹಿಂದುತ್ವವಾದಿ.
ಶ್ರೀ ಬಿ.ಎಂ ಸುಕುಮಾರ ಶೆಟ್ಟಿ ಅವರು ಹಣ, ಅಧಿಕಾರದ
ಆಸೆ ಇಲ್ಲದೆ ಸನ್ಯಾಸಿಯಂತೆ ಜೀವನ ನಡೆಸುತ್ತಿರುವ
ಒಬ್ಬ ಪ್ರಖರ ಹಿಂದುತ್ವವಾದಿ.
ನಾಯಕತ್ವಕ್ಕೆ ಸ್ಪೂರ್ತಿಯಾಯ್ತು ವಿದ್ಯಾರ್ಥಿ ಜೀವನದ ಹೋರಾಟ
ಉದ್ಯಮಿಯಾಗಿ ಸಹಸ್ರಾರು ಮಂದಿಗೆ
ಅನ್ನದಾತರೆನೆಸಿಕೊಂಡಿದ್ದ ಶ್ರೀ ಬಿ.ಎಂ ಸುಕುಮಾರ ಶೆಟ್ಟಿ
ಧಾರ್ಮಿಕ, ಶೈಕ್ಷ ಣಿಕ, ರಾಜಕೀಯ ಕ್ಷೇತ್ರಗಳಲ್ಲಿ ತನ್ನದೆ
ಆದ ವರ್ಚಸ್ಸು ಮೂಡಿಸಿದವರು. ಸಣ್ಣ ವಯಸ್ಸಿನಲ್ಲಿಯೆ
ನಾಯಕತ್ವ ಗುಣ ಮೈಗೂಡಿಸಿಕೊಂಡಿದ್ದ ಅವರು
ಕಾಲೇಜಿನ ವಿದ್ಯಾರ್ಥಿಯಾಗಿರುವಾಗಲೆ ಅನೇಕ
ಹೋರಾಟಗಳಲ್ಲಿ ತಮ್ಮನು ತಾವು ಸಕ್ರಿಯವಾಗಿ
ತೊಡಗಿಸಿಕೊಂಡವರು.ಕಾಲೇಜು ಜೀವನದಿಂದ
ಹೊರಬರುತ್ತಲೆ ನಾಯಕನಾಗಿ ರೂಪುಗೊಂಡವರು.
ಅಂದಿನಿಂದ ಇಂದಿನವರೆಗೂ ಕುಂದಾಪುರ ಭಾಗದ ಜನರ
ದನಿಗೆ ಹೆಚ್ಚಿನ ಅರ್ಥ ಕಲ್ಪಿಸಿಕೊಡುವಲ್ಲಿ ಅವಿರತವಾಗಿ
ಶ್ರಮಿಸುತ್ತಿರುವ ದೂರದೃಷ್ಟಿಯ ನಾಯಕ
ಶ್ರೀ ಬಿ.ಎಂ ಸುಕುಮಾರ ಶೆಟ್ಟಿ.

ಆರಂಭಿಕವಾಗಿ ಒಂದು ರಾಜಕೀಯ ಪಕ್ಷ ದಲ್ಲಿ ಗುರುತಿಸಿಕೊಂಡರೂ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದುಕೊಂಡೆ ಗ್ರಾಮೀಣ ಪ್ರದೇಶಗಳಲ್ಲಿ ಪಕ್ಷ ಗಟ್ಟಿಗೊಳಿಸಿದವರು. ತಳಮಟ್ಟದಲ್ಲಿ ನಾಯಕತ್ವ ರೂಪಿಸಿ ಗಟ್ಟಿಗೊಳಿಸುವ ನಿಸ್ಸೀಮತೆಯನ್ನು ವಿದ್ಯಾರ್ಥಿ ಜೀವನದಲ್ಲೇ ಪಡೆದಿದ್ದರೂ ಯಾವತ್ತೂ ಸ್ಥಾನಮಾನದ ಅಪೇಕ್ಷೆ ಪಟ್ಟವರಲ್ಲ. ಆದರೆ ಅವರ ನಾಯಕತ್ವಕ್ಕೆ ಸ್ಥಾನಮಾನ ಹುಡುಕಿಕೊಂಡು ಬಂದವು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಕೊಲ್ಲೂರು ಕ್ಷೇತ್ರವನ್ನು ರಾಷ್ಟ್ರವ್ಯಾಪಿಯಾಗಿ ಗುರುತಿಸುವಂತೆ ಮಾಡಿದರಲ್ಲದೆ ಭಕ್ತರ ಅನುಕೂಲಕ್ಕಾಗಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡರು.
ಗ್ರಾಮೀಣ ಪ್ರದೇಶದ ಮಕ್ಕಳನ್ನು ಅಕ್ಷರ ಪ್ರಪಂಚಕ್ಕೆ ಪರಿಚಯಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಅವಿರತ ಶ್ರಮಿಸುತ್ತಿರುವ ಮಹತ್ಸಾಧನೆಗಳ ಹೆಗ್ಗಳಿಕೆ ಶ್ರೀ ಬಿ.ಎಂ ಸುಕುಮಾರ ಶೆಟ್ಟಿ ಅವರದ್ದು .ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಸಂಚಾಲಕತ್ವ ವಹಿಸಿಕೊಂಡು 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವುದರೊಂದಿಗೆ ಸೊಸೈಟಿಯ ಸಮೂಹ ಶಿಕ್ಷ ಣ ಸಂಸ್ಥೆಗಳಲ್ಲಿ ಆರ್ಥಿಕವಾಗಿ ದುರ್ಬಲ ಕುಟುಂಬದ ಮಕ್ಕಳಿಗೆ ಹೆಚ್ಚಿನ ಒತ್ತು ನೀಡಿ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದವರು.
ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜು, ವಿ.ಕೆ.ಆರ್.ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಎಚ್‌ಎಂಎಂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಂತಹ ಹಲವಾರು ವಿದ್ಯಾ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ, ಬಡ ವಿದ್ಯಾರ್ಥಿಗಳಿಗೆ ನೆರವಾಗುತ್ತಾ ಭಗವಂತ ಮೆಚ್ಚುವ ಕಾರ್ಯದಲ್ಲಿ ನಿರತರಾಗಿರುವ ಶ್ರೀ ಬಿ.ಎಂ ಸುಕುಮಾರ ಶೆಟ್ಟಿ ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ.
ಭ್ರಷ್ಟರಿಗೆ ಸಿಂಹಸ್ವಪ್ನ
ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಧಾನಸಭೆ ಚುನಾವಣೆಯಲ್ಲಿ ಜಯ ಗಳಿಸಿ ಶಾಸಕರಾಗಿ ಕೆಲಸ ನಿರ್ವಹಿಸುತ್ತಿರುವ ಶ್ರೀ ಬಿ.ಎಂ ಸುಕುಮಾರ ಶೆಟ್ಟಿ ಭ್ರಷ್ಟಾಚಾರಿಗಳಿಗೆ ಸಿಂಹಸ್ವಪ್ನ ಎನಿಸಿಕೊಂಡಿದ್ದಾರೆ. ಅಧಿಕಾರಿಗಳು ಲಂಚ ಸ್ವೀಕರಿಸಿದರೆ ನನಗೆ ತಿಳಿಸಿ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಬೈಂದೂರು ಕ್ಷೇತ್ರವನ್ನು ಅತ್ಯುನ್ನತವಾಗಿ ಅಭಿವೃದ್ಧಿಗೊಳಿಸಿ ಬೈಂದೂರು ಕ್ಷೇತ್ರಕ್ಕೆ ಹೊಸ ರೂಪು ನೀಡಬೇಕು ಎಂಬ ಕನಸು ಹೊತ್ತಿರುವ ಧೀಮಂತ ಜನನಾಯಕ ಶ್ರೀ ಬಿ.ಎಂ ಸುಕುಮಾರ ಶೆಟ್ಟಿ.
ಶಿಕ್ಷಣದಿಂದ ಸದೃಢ ದೇಶ ನಿರ್ಮಾಣ BMS
ಶಿಕ್ಷ ಣ ಕೇವಲ ಉಳ್ಳವರ ಸ್ವತ್ತಾಗದೆ ಸಮಾಜದ ಕಟ್ಟಕಡೆಯ ಮಗುವಿಗೂ ಲಭ್ಯವಾದಾಗ ಸದೃಢ ದೇಶ ನಿರ್ಮಾಣ ಸಾಧ್ಯ. ಬೈಂದೂರು ಕ್ಷೇತ್ರವನ್ನು ಶೈಕ್ಷಣಿಕವಾಗಿ ಸದೃಢಗೊಳಿಸುವುದರ ಜತೆಗೆ ಕ್ಷೇತ್ರದ ಸಮಸ್ತ ಅಭಿವೃದ್ಧಿಯೇ ನನ್ನ ಪರಮೊದ್ಧೇಶವಾಗಿದ್ದು, ಜೀವನಪರ್ಯಂತ ಸಮಾಜ ಸೇವಕನಾಗಿ ಶ್ರಮಿಸುತ್ತೇನೆ. ಅಧಿಕಾರ ಯಾವಾಗಲು ಶಾಶ್ವತವಲ್ಲ ಅಧಿಕಾರದ ಅವಧಿಯಲ್ಲಿ ಜನರಿಗೆ ನೀಡುವ ಸೇವೆ ಸದಾ ಶಾಶ್ವತವಾಗಿರುತ್ತದೆ. ಕ್ಷೇತ್ರದ ಶಾಸಕನನ್ನಾಗಿ ಆರಿಸಿದ ಜನರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ ಹಾಗಾಗಿ ಅಭಿವೃದ್ದಿಯ ಮೂಲಕ ಬೈಂದೂರು ಕ್ಷೇತ್ರದ ಜನರ ಸೇವೆ ಮಾಡುವೆ ಎನ್ನುವ ಶ್ರೀ ಬಿ.ಎಂ ಸುಕುಮಾರ ಶೆಟ್ಟಿ ಅವರು ಧನಾತ್ಮಕ ಚಿಂತನೆಯ ಅಪ್ರತಿಮ ಆಶಾವಾದಿ ಜನನಾಯಕ.
7483946089

ಜೀವನದಲ್ಲಿ ಶ್ರೇಷ್ಠ ವ್ಯಕ್ತಿತ್ವ ಮೈಗೂಡಸಿಕೊಂಡು ಎಲ್ಲ ಆಯಾಮಗಳಲ್ಲೂ ವಿಶೇಷವಾಗಿ ತೊಡಗಿಸಿಕೊಂಡಂತಹ ಶ್ರೀ ಬಿ.ಎಂ ಸುಕುಮಾರ ಶೆಟ್ಟಿ ಅವರು ಒಬ್ಬ ಅಸಾಧಾರಣ ವ್ಯಕ್ತಿ. ನಿರಂತರ ಪರಿಶ್ರಮವೇ ಯಶಸ್ಸಿಗೆ ಮೂಲಾಧಾರ ಎನ್ನುವುದಕ್ಕೆ ಜ್ವಲಂತ ಸಾಕ್ಷಿಯಾಗಿರುವ ಅವರಿಂದ ಬೈಂದೂರು ಕ್ಷೇತ್ರ ಸಮಗ್ರವಾಗಿ ಅಭಿವೃದ್ಧಿ ಕಾಣಲಿ. ಹಳ್ಳಿಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ದಿಪಡಿಸಿ, ಸರ್ಕಾರದ ಸೌಲಭ್ಯಗಳು ಸರಿಯಾದ ಸಮಯಕ್ಕೆ ಅರ್ಹರಿಗೆ ತಲುಪುವಂತಾಗಲಿ ಎಂದು ಆಶಿಸೋಣ.
ನರೇಂದ್ರ ತಗ್ಗರ್ಸೆ
7483946089
![Image Description](https://blogger.googleusercontent.com/img/b/R29vZ2xl/AVvXsEgO22W32m9Z8_WaqwQm54uXAf0rGR403OsXswuCRpi1NfZTRV0HkeBMeRuFWe7QGXvJcDxOawjogeec_eJfbzvwFE-vFAHiF3uf59qBODgACRrR8ebNOZzv-v98BkVwEzWYeAf-yNZL5BNL95n_GrigSP1QDJ0b-rNAFzZTBFECnUVfZ3siDGnZJqqJNkw/s1600/Purple%20Futuristic%20Digital%20Marketing%20Agency%20Youtube%20Display%20Ad.gif)
0 Comments
coverpage.in welcomes your suggestions !